Welcome, Guest   [ Register | Sign In | Take a tour | Adult Filter: On ]

ನಾನು ಎಷ್ಟು ದೊಡ್ಡವನು?


ನಾನು ಅಗಾಗ ಅಂದುಕೊಳ್ಳುತ್ತೇನೆ ನಾನು ದೊಡ್ಡವನು, ನಾನು ಮುಖ್ಯ, ನನಗೆ ನನ್ನದೇ ಜೀವನವಿದೆ, ನಾನು ಸಾಧಿಸಬೇಕಾದ್ದು ಬಹಳಷ್ಟಿದೆ. ಪ್ರತೀ ಸಲ ಈ ರೀತಿ ಯೋಚಿಸಿದಾಗೆಲ್ಲ, ನನ್ನೊಳೊಗೊಂದು ಪ್ರಶ್ನೆ ಉದ್ಭವಿಸುತ್ತದೆ. ಅಕಸ್ಮಾತ್ ನಾನೇನಾದರು ಹುಟ್ಟಿಲ್ಲದಿದ್ದರೆ ಈ ಪ್ರಪಂಚದಲ್ಲಿ ಏನು ವ್ಯತ್ಯಾಸವಾಗುತ್ತಿತ್ತು?


ತತ್‌ಕ್ಷಣ ನನ್ನೊಳಗಿರುವ ಹಾಸ್ಯಗಾರ ಉತ್ತರಿಸುತ್ತಾನೆ. ಅಕಸ್ಮಾತ್ ನಾನು ಹುಟ್ಟಿಲ್ಲದಿದ್ದರೆ ಭಾರತ ದೇಶದ ಜನಸಂಖ್ಯೆ ಒಂದು ಕದಿಮೆಯಾಗುತ್ತಿತ್ತು. ಶಾಲೆಗಳಲ್ಲಿ ಅಟೆಂಡೆನ್ಸ್ ರಿಜಿಸ್ಟರ್ ನಲ್ಲಿ ಒಂದು ಹೆಸರು ಕದಿಮೆಯಿರುತ್ತಿತ್ತು. ಅಷ್ಟೆ, ಇನ್ನೇನು ಬದಲಾಗುತ್ತಿರಲಿಲ್ಲ.

ನಮ್ಮಲ್ಲಿ ಹಿಂದಿನಿಂದ ಬಂದ ನಂಬಿಕೆಗಳ ಪ್ರಕಾರ ಸತ್ತ ನಂತರ ಮನುಷ್ಯ ಆಕಾಶದಲ್ಲಿ ನಕ್ಷತ್ರವಾಗುತ್ತಾನೆ. ಕತ್ತಲೆಯ ರಾತ್ರಿಯಲ್ಲಿ ತಲೆಯೆತ್ತಿ ಆಗಸ ದಿಟ್ಟಿಸಿದರೆ ಈ ನಂಬಿಕೆ ನಿಜವೇನೋ ಅನ್ನಿಸುತ್ತದೆ. ಈ ಭೂಮಿ ಸೃಷ್ಟಿಯಾದಾಗಿನಿಂದ ಇವತ್ತಿನವರೆಗೆ ಅದೆಷ್ಟು ಜೀವಿಗಳು ಬದುಕಿ ಬಾಳಿದ್ದವೋ ಅವಕ್ಕೆಲ್ಲ ಒಂದೊಂದು ನಕ್ಷತ್ರವಿದೆ. ಮತ್ತೆ ವೈಜ್ಞಾನಿಕವಾಗಿ ಯೊಚಿಸಿ ನೋಡಿ. ನಮ್ಮ ಗ್ಯಾಲಕ್ಸಿಯಲ್ಲಿ 1000ಕೋಟಿ ನಕ್ಷತ್ರಗಳಿವೆ. ಇಂತಹ ಸಾವಿರಕೋಟಿ ಗ್ಯಾಲಕ್ಸಿಗಳಿವೆ. ನಮ್ಮ ಸೂರ್ಯನ ಸುತ್ತ 8-9 ಗ್ರಹಗಳಿವೆ. ಇನ್ನು ಈ ಅಸಂಖ್ಯಾತ ನಕ್ಷತ್ರಗಳ ಸುತ್ತ ಅದೆಷ್ಟು ಗ್ರಹ, ಉಪಗ್ರಹಗಳಿವೆಯೋ? ಇಂತಹ ಅಸಂಖ್ಯ ಗ್ರಹಗಳಲ್ಲಿ ಕೆಲವಲ್ಲಾದರೂ ಜೇವಿಗಳಿರಬಹುದು. ಈ ಅನಂತ ವಿಶ್ವದಲ್ಲಿ ಯಾವುದೋ ಚಿಕ್ಕ ಗ್ಯಾಲಕ್ಸಿಯಲ್ಲಿ, ಚಿಕ್ಕ ನಕ್ಷತ್ರ ಸೂರ್ಯನ ಸುತ್ತ ಸುತ್ತುತ್ತಿರುವ ಚಿಕ್ಕ ಗ್ರಹ ಭೂಮಿಯಲ್ಲಿ ನಾನು ಅದೆಷ್ಟು ದೊಡ್ಡವನೋ?

ಹಕ್ಕು ನಿರಾಕರಣೆ